ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಿಇಟಿ ಪರೀಕ್ಷೆ: ಮಂಗಳೂರು: 3572 ವಿದ್ಯಾರ್ಥಿಗಳು ಗೈರು

ಸಿಇಟಿ ಪರೀಕ್ಷೆ: ಮಂಗಳೂರು: 3572 ವಿದ್ಯಾರ್ಥಿಗಳು ಗೈರು

Thu, 29 Apr 2010 07:24:00  Office Staff   S.O. News Service

ಸಿಇಟಿ ಪರೀಕ್ಷೆ: ಮಂಗಳೂರು: 3572 ವಿದ್ಯಾರ್ಥಿಗಳು ಗೈರು

 ಮಂಗಳೂರು, ಎ.28: ಕರ್ನಾಟಕ ಪರೀಕ್ಷೆ ಪ್ರಾಧಿಕಾರ (ಕೆಇಎ) ದಕ್ಷಿಣ ಕನ್ನಡ ಜಿಲ್ಲೆಯ 12 ಕೇಂದ್ರದಲ್ಲಿ ಇಂದು ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2010)ಯಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಡಿ.ಸಿ. ಕಚೇರಿಯ ಅಧೀಕ್ಷಕ ಆನಂದ ನಾಯ್ಕಾ ತಿಳಿಸಿದ್ದಾರೆ.

Cet-10.jpg

 

ಬೆಳಗ್ಗೆ ಜೀವಶಾಸ್ತ್ರ ಪರೀಕ್ಷೆ ನಡೆದಿದ್ದು, 6918 ವಿದ್ಯಾರ್ಥಿಗಳ ಪೈಕಿ 3346 ಮಂದಿ ಹಾಜರಾಗಿದ್ದರೆ, 3572 ಮಂದಿ ಗೈರು ಹಾಜರಾಗಿದ್ದಾರೆ. ಮಧ್ಯಾಹ್ನ ನಂತರ ನಡೆದ ಗಣಿತ ಪರೀಕ್ಷೆಯಲ್ಲಿ 6738 ಮಂದಿ ಹಾಜರಾಗಿದ್ದರೆ,180 ಮಂದಿ ಗೈರು ಹಾಜರಾಗಿದ್ದರು.

ಮಂಗಳೂರು ನಗರದ 7 ಮತ್ತು ಮೂಡಬಿದ್ರಿಯ 3 ಹಾಗೂ ಪುತ್ತೂರಿನ 2 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. 12 ಮಂದಿ ಕ್ಲಾಸ್ 1 ಅಧಿಕಾರಿಗಳನ್ನು ಮೇಲುಸ್ತುವಾರಿಗೆ ನೇಮಿಸಲಾಗಿತ್ತು. 12 ಕೇಂದ್ರಗಳಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿದರು. ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

 ಉಡುಪಿ: 1566 ಮಂದಿ ಗೈರು:

ಉಡುಪಿ, ಎ.28: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವತ್ತಿಪರ ಕೋರ್ಸುಗಳಿಗೆ ಪ್ರವೇಶಕ್ಕಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಸಿಇಟಿ ಇಂದು ಉಡುಪಿ ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ಆರಂಭಗೊಂಡಿತು.

 ಸಿಇಟಿ ಪರೀಕ್ಷೆಗಾಗಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 2964 ಮಂದಿ ಹೆಸರು ನೋಂದಾಯಿಸಿದ್ದು, ಬೆಳಗ್ಗೆ ನಡೆದ ಜೀವಶಾಸ್ತ್ರ ಪರೀಕ್ಷೆಗೆ 1398 ಮಂದಿ ಮಾತ್ರ ಹಾಜರಾಗಿದ್ದು 1,566 ಮಂದಿ ಗೈರು ಹಾಜರಾಗಿದ್ದರು.

ಅಪರಾಹ್ಣ ನಡೆದ ಗಣಿತ ಪರೀಕ್ಷೆಯಲ್ಲಿ 2909 ಮಂದಿ ಉತ್ತರ ಬರೆದಿದ್ದು, 55 ಮಂದಿ ಗೈರುಹಾಜರಾಗಿದ್ದರು ಎಂದು ಪದವಿ ಪೂರ್ವ ಕಾಲೇಜು ವಿಭಾಗದ ಉಪನಿರ್ದೇಶಕ ಎಸ್.ಎಸ್.ಶಿಂಧೆ ತಿಳಿಸಿದರು.

 ನಾಳೆ ಭೌತಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಉಡುಪಿಯ ಪೂರ್ಣಪ್ರಜ್ಞ ಪ.ಪೂ. ಕಾಲೇಜು ಕೇಂದ್ರದಲ್ಲಿ 544 ಮಂದಿ, ಮಣಿಪಾಲ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 602, ಎಂಜಿಎಂ ಕಾಲೇಜು ಕೇಂದ್ರದಲ್ಲಿ 602, ಸರಕಾರಿ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 352, ವಿದ್ಯೋದಯ ಪ.ಪೂ.ಕಾಲೇಜು ಕೇಂದ್ರದಲ್ಲಿ 512 ಹಾಗೂ ಸರಕಾರಿ ಬಾಲಕಿಯರ ಪ.ಪೂ.ಕಾಲೇಜು ಕೇಂದ್ರದಲ್ಲಿ 352 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ ಎಂದು ಅವರು ಹೇಳಿದರು.



Share: